ಹನಿಗೂಡಿ ಬೆಳೆಯುತ್ತಿದೆ ಹಳ್ಳ

Posted on: 07 Aug 2018

Category: Kannada Blog

Blog Views: 1791

ಇದು ನನ್ನ ಹನಿಗವನಗಳ ಮುಂದುವರಿದ ಮೂರನೇಯ ಭಾಗ, ಹನಿಗೂಡಿ ಹಳ್ಳ-3. ಈ ಮುಂಚಿನ ಹಳ್ಳಗಳು ಇಲ್ಲಿವೆ.

http://vittalshenoy.com/pages/myBlogs.go?blogId=14

http://vittalshenoy.com/pages/myBlogs.go?blogId=5

 

ತರಕಾರಿಗಳ ರಾಜ

ತರಕಾರಿಗಳ ರಾಜ ಖಂಡಿತ ಕ್ಯಾರೆಟ್

ಯಾಕಂದ್ರೆ ಚಿನ್ನದಂಗಡಿಯಲ್ಲಿ

ಚಿನ್ನ ಕೊಳ್ಳಲು ಹೋದರೆ ಮೊದಲು ಕೇಳುತ್ತಾರೆ

ಎಷ್ಟು ಕ್ಯಾರೆಟ್ಟಿದ್ದು?

 

ಮದುವೆಗಳು

ಆಷಾಢ ಮುಗಿದು ಬಂತು ಶ್ರಾವಣ

ಸಾಲು ಸಾಲಾಗಿ ಬಂತು ಮದುವೆಗಳ ಆಮಂತ್ರಣ

ಶುಭ ಲಗ್ನದಲ್ಲೇ ಭರ್ಜರಿಯಾಗಿ ಜರುಗಿದವು ಮದುವೆಗಳು

ಒಂದು ವರ್ಷದಲ್ಲೇ ನವದಂಪತಿಗಳಿಗೆ ತಿಳಿಯಿತು ಮದುವೆ ಗೋಳು!

 

ಬೆಳೆಯುವ ಸಿರಿ

  ಎರಡು ವರ್ಷದ ಮಗು ಐ-ಫೋನ್ ಎತ್ತಿ 

hey siri hey siri ಅಂತ ಮಾತಾಡಿತು

ನಿಜವಾಯಿತು ಗಾದೆ ಮಾತು

ಬೆಳೆಯುವ ಸಿರಿ ಮೊಳಕೆಯಲ್ಲಿ?

 

ಸಿರಿವಂತರು

ಬೆಲೆಬಾಳುವ ಐ-ಫೋನ್ ಕೊಂಡ ಅವನು

ನಿಜವಾಗಲೂ siriವಂತ ಅಲ್ಲವೇ ಅವನು?

 

ಚಿಂದಿ ಚಿತ್ರಾನ್ನ

ಅಡುಗೆ ಪುಸ್ತಕದ ಪುಟ ತಿರುವಿದೆ, ಮಾಡಲು ಚಿತ್ರಾನ್ನ

ಅರ್ಧದಲ್ಲೇ  ಪುಟಗಳು ಹಾರಿ, ಈಗ ನಾನು ಮಾಡಿದ್ದು ವಿಚಿತ್ರಾನ್ನ 

 

ಅಭಿನೇತ್ರ

ಬ್ಯಾಚುಲರ್ ಆಗಿದ್ದಾಗ ಅವನು ವಿಪರೀತವಾಗಿ ಮಾಡುತ್ತಿದ್ದ ಏಕ ಪಾತ್ರಾಭಿಯ

ಮದುವೆಯ ನಂತರ ಮಾತು ಹೊರಬರದೇ ಈಗ ಮೂಕ ಪಾತ್ರಾಭಿನಯ

 

 

 

 

Tags: ಹನಿಗೂಡಿ ಬೆಳೆಯುತ್ತಿದೆ ಹಳ್ಳ, ಹನಿಗವನಗಳು, ಹನಿಗೂಡಿ ಹಳ್ಳ