ಅಶ್ವತ್ಥಾಮನ್

Posted on: 01 May 2020

Category: Book Review

Blog Views: 1731

ಪುಸ್ತಕ: ಅಶ್ವತ್ಥಾಮನ್

ಲೇಖಕರು: ಜೋಗಿ

ಪ್ರಕಾಶಕರು: MyLang Books 

 

ಇದು ಕನ್ನಡದಲ್ಲಿ ಬಹುಶಃ ಏಕಕಾಲದಲ್ಲಿ ಪೇಪರ್-ಪುಸ್ತಕ, ಇ-ಪುಸ್ತಕ, ಶ್ರವಣ-ಪುಸ್ತಕ ವಾಗಿ ಬಿಡುಗಡೆಯಾದ ಮೊದಲ ಪುಸ್ತಕ. ಪ್ರಖ್ಯಾತ ನಟನೊಬ್ಬನ ಆತ್ಮಚರಿತ್ರೆ ಬರೆಯಲು ಹೋದಾಗ ಸಿಗುವ ಅವನ ಜೀವನದ ಪರಿಚಯ. ಒಂದು ವ್ಯಕ್ತಿತ್ವಕ್ಕಿರುವ ಹಲವು ಆಯಾಮಗಳನ್ನು ತೆರೆದು ಬಹುವ್ಯಕ್ತಿತ್ವವನ್ನು ಅನಾವರಣ ಗೊಳಿಸುವ ಕಥೆ. ಕೆಲವು ಕಡೆ ಪ್ರೀತಿ, ಇನ್ನು ಕೆಲವು ಕಡೆ ಭೀತಿ, ಒಂದಷ್ಟು ವಿಕೃತ ಭಾವಗಳು, ಸ್ವಲ್ಪ ಜೀವನದ ಕಹಿ ಎಲ್ಲವನ್ನೂ ಮಿಶ್ರ ಮಾಡಿದ ಚರ್ವಿತ ಚರ್ವಣ! ಕಥೆಯೊಂದು ಹೀಗೆಯೇ ಇರಬೇಕು ಎಂಬ ಚೌಕಟ್ಟನ್ನು ಪಾಲಿಸದೆ ಒಂದು ಮುಕ್ತ ಶೈಲಿಯಲ್ಲಿ ಬರೆದ ಪುಸ್ತಕ. ಜೋಗಿಯವರ ಶೈಲಿ ಹೀಗೆಯೇ ಎಂದು ಕೇಳಿದ್ದೇನೆ, ಆದರೆ ಇದು ನಾನು ಓದಿದ ಅವರ ಮೊದಲ ಪುಸ್ತಕ.   ಹಿತಮಿತವಾಗಿ ಓದಿಸಿ ಹೋಗುವ ವಿಭಿನ್ನ ಕಥೆ. ನಿಮ್ಮ ನೆಚ್ಚಿನ ನಟನನ್ನು ಊಹಿಸಿ, ಅವರ ಬದುಕೂ ಹೀಗಿರಬಹುದೇ? ನಟರೆಲ್ಲರೂ ಹೀಗೆಯೇ ಬದುಕುತ್ತಾರೆಯೇ ಎಂಬ ಪ್ರಶ್ನೆ ಆಗಾಗ ಕೇಳುವ ಪುಸ್ತಕ.

ನಾನು ಓದಿದ ಮೊದಲ ಕನ್ನಡ ಇ-ಪುಸ್ತಕ! ಅನೇಕ ಇ-ಪುಸ್ತಕಗಳನ್ನು ಹೊರತರುತ್ತಿರುವ ಮೈ ಲ್ಯಾಂಗ್ ಸಂಸ್ಥೆಗೂ, ಲೇಖಕ ಜೋಗಿಯವರಿಗೂ ಅಭಿನಂದನೆಗಳು.  

 

Tags: ಅಶ್ವತ್ಥಾಮನ್, Book Review