ಹನಿಗೂಡಿ ಹಳ್ಳ- 1

Posted on: 28 Jul 2018

Category: Kannada Blog

Blog Views: 3016

ಇದು ನಾನು ಬರೆದ ಕೆಲವು ಹನಿಗವನಗಳು. ಬಿಡಿ ಬಿಡಿಯಾಗಿ ಅಲ್ಲಲ್ಲಿ ಬ್ಲಾಗ್ ರೂಪದಲ್ಲಿ ಸರಣಿಯಾಗಿ ಪ್ರಕಟಿಸುವೆ. ಇಷ್ಟವಾದಲ್ಲಿ, ಶೇರ್, ಲೈಕ್, ಕಾಮೆಂಟ್ ಮಾಡಲು ಸಂಕೋಚ ಪಡದಿರಿ

wink

ಚುನಾವಣೆ

ಚುನಾವಣೆಯ ಮುಂಚೆ ಎಲ್ಲೆಲ್ಲೂ

ನಮೋ ರಾಗಾ ನಮೋ ರಾಗಾ ನಮೋ ರಾಗಾ

ಚುನಾವಣೆ ಮುಗಿದ ಮೇಲೆ ಅಧಿಕಾರಕ್ಕೆ ಬಂದವರು

ಮೌನ ರಾಗ ಮೌನ ರಾಗ ಮೌನ ರಾಗ

 

ಕನ್ನಡದ ಕಲಿ

ಹಿಂದೆ ಹುಟ್ಟಿದವರಲ್ಲಿ ಅನೇಕರು ಆಗುತ್ತಿದ್ದರು

ಕನ್ನಡದ ಕಲಿ, ಕನ್ನಡದ ಕಲಿ

ಇಂದು ಹುಟ್ಟಿದವರಲ್ಲಿ ಅನೇಕರಿಗೆ ಹೇಳಬೇಕು

ಕನ್ನಡವ ಕಲಿ ಕನ್ನಡವ ಕಲಿ

 

ಮತದಾರನ ನೋಟ

ನನಗೆ ಮತ ಹಾಕು ಅಂತ ಪುಡಾರಿ

ಕೊಟ್ಟ ಐನೂರು ನೋಟ, ಸಾವಿರದ ನೋಟ

ಜೇಬಿಗೆ ಅದನ್ನು ಇಳಿಸಿ ಮತದಾರ

ಒತ್ತಿದ NOTA NOTA

 

ಸಿ ಕೂಡಿಸು ಕೂಡಿಸು

ಈಗಿನ ಮಕ್ಕಳು ಎಂಟನೇ ಕ್ಲಾಸಿನಲ್ಲೇ

ಶುರು ಮಾಡುತ್ತಾರೆ ಓದಲು C++, Java

ಆ ಪ್ರಾಯದಲ್ಲಿ ಓದುವುದು ಬಿಡಿ

ನಾವಂತೂ ಏಳುತ್ತಿರಲಿಲ್ಲ ಬೆಳಗ್ಗಿನ ಜಾವ

 

ಆಸರೆ

ಮದುವೆಯ ಮುನ್ನ ಪಾರ್ಕಿನಲ್ಲಿ ಕುಳಿತಿದ್ದಾಗ ಅವಳು ಕೇಳಿದಳು

“ಚಿನ್ನಾ, ಕೊಡುವೆಯಾ ನನಗೆ ನಿನ್ನ ಜೀವನದಲಿ ಆಸರೆ?”

ಮದುವೆಯಾಗಿ ಮೊನ್ನೆ ಮಾಲಿನಲ್ಲಿ ಅಂಗಡಿಯಲ್ಲಿ ಕೇಳಿದಳು

“ನನಗೆ ಚಿನ್ನ ಕೊಡುವೆಯಾ ಅಥವಾ ಆ ಸಾರಿ?”

 

ಆರೋಗ್ಯವಾಣಿ

ಆರೋಗ್ಯ ಚೆನ್ನಾಗಿರಲಿ ಅಂತ ದಿನಾ ಬೆಳಿಗ್ಗೆ ಕುಡಿಯುತ್ತಾನೆ ಬಿಸಿ ನೀರಲ್ಲಿ ಹಾಕಿ ಬಾರ್ಲಿ

ಆದರೇನು ಮಾಡುವುದು, ಸಾಯಂಕಾಲ ದಿನಾ ಅವನಿರುವುದು ಬಾರಲ್ಲಿ

 

 

 

 

 

 

 

 

Tags: ಹನಿಗೂಡಿ ಹಳ್ಳ- 1, ಹನಿಗವನಗಳು, ಕನ್ನಡ ಕವನಗಳು