ಏರಿಳಿತದ ದಾರಿಯಲ್ಲಿ

Posted on: 26 Jul 2018

Category: Book Review

Blog Views: 1833

ಏರಿಳಿತದ ದಾರಿಯಲ್ಲಿ

ಇದೊಂದು ವೃತ್ತಿ ಕಥಾನಕ. ಸುಧಾ ಮೂರ್ತಿಯವರು ಇನ್ಫೋಸಿಸ್ ಪ್ರತಿಷ್ಠಾನದಲ್ಲಿರುವಾಗ ಆದ ನಿಜ ಜೀವನದ ಅನೇಕಾನೇಕ ಘಟನೆಗಳನ್ನು ಪುಸ್ತಕ ರೂಪದಲ್ಲಿ ಬರೆದಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ಇವರ ಬರವಣಿಗೆ ಸರಳ ಮತ್ತು ನಿರೂಪಣೆ ಸುಂದರ. 28 ಅಧ್ಯಾಯಗಳು 28 ಸಣ್ಣಪುಟ್ಟ ಘಟನೆಗಳನ್ನು ಮಾರ್ಮಿಕವಾಗಿ ವಿವರಿಸುತ್ತವೆ. ಹಲವು ಆಸಕ್ತಿಯುತ ವ್ಯಕ್ತಿಗಳನ್ನೂ ಪರಿಚಯಿಸುತ್ತದೆ. ಈ ಪುಸ್ತಕವನ್ನು ಆರಾಮವಾಗಿ ಯಾವಾಗಲಾದರೂ ಐದೋ-ಹತ್ತೋ ನಿಮಿಷ ಸಮಯವಿದ್ದರೆ ಒಂದು ಅಧ್ಯಾಯವನ್ನು ತೆರೆದು ಓದಿ ಮುಗಿಸಬಹುದು. ಬಹುಶಃ ಎಲ್ಲಾ ಪ್ರಮುಖ ಅಂಗಡಿ ಮತ್ತು sapnaonline ನಲ್ಲಿ ಸಿಗಬಹುದು.

 

Tags: ಏರಿಳಿತದ ದಾರಿಯಲ್ಲಿ, Book Review, ಪುಸ್ತಕ ವಿಮರ್ಶೆ