ಕರಿಸಿರಿಯಾನ

Posted on: 26 Jul 2018

Category: Book Review

Blog Views: 2079

ಕರಿಸಿರಿಯಾನ (ಡಾ. ಕೆ. ಎನ್. ಗಣೇಶಯ್ಯ)

ಇದೊಂದು ಅದ್ಭುತ ಮತ್ತು ವಿಶಿಷ್ಟವಾದ ಕಾದಂಬರಿ. ಓದುಗರನ್ನು ತನ್ನತ್ತ ಪುಟದಿಂದ ಪುಟಕ್ಕೆ ಸೆಳೆಯುತ್ತಾ ಹೋಗುತ್ತದೆ. ಬರವಣಿಗೆಯ ಶೈಲಿ ಸ್ವಲ್ಪ ಮಟ್ಟಿಗೆ ಚಿತ್ರಕಥೆಯ ರೂಪದಲ್ಲಿದೆ. (ಪ್ರತಿಯೊಂದು ದೃಶ್ಯದ ಸ್ಥಳ, ಸಮಯ ನಮೂದಿಸಿ screenplay slugline ತರಹ). ಹಲವಾರು ಪುಟಗಳಲ್ಲಿ ಚಿತ್ರಗಳ ಜೊತೆ ನಿರೂಪಣೆ ಇದ್ದು, ಇಂತಹ ಕಥೆಗೆ ಪೂರಕವಾಗಿದೆ.

ರಕ್ಕಸತಂಗಡಿ / ತಾಳಿಕೋಟೆ ಕದನದ ಸೋಲಿನ ನಂತರ ವಿಜಯನಗರದ ಅಪಾರ ಸಂಪತ್ತನ್ನು ಆನೆಗಳ ಮೇಲೆ ಹೊರಿಸಿ ಒಂದು ಗುಪ್ತ ಸ್ಥಳದಲ್ಲಿ ಬಚ್ಚಿಡಲಾಗಿದೆ, ಆ ಸ್ಥಳ ಯಾವುದು? ಅಲ್ಲಿ ಇನ್ನೂ ನಿಧಿ ಇದೆಯೇ ಎಂದು ಅನೇಕ ಆಸಕ್ತ ಗುಂಪುಗಳು ನಡೆಸುವ ಪ್ರಯತ್ನ ಈ ಕಾದಂಬರಿಯ ತಿರುಳು. ಅವರು ಯಾರು? ನಿಧಿ ಸಿಗುತ್ತದೆಯೇ ಇದನ್ನು ಇನ್ನೂ ಓದದವರು ಓದಿ ತಿಳಿದುಕೊಳ್ಳಿ. ಅನೇಕಾನೇಕ ಮಾಹಿತಿಗಳು, ವಿವರಣೆ, ವ್ಯಾಖ್ಯಾನದಿಂದ ತುಂಬಿದ ಈ ಕಾದಂಬರಿ ಮೊದಲ ಪುಟದಿಂದ ಕೊನೆಯ ಪುಟದ ವರೆಗೂ ಅಪ್ಪಟ ರತ್ನ. ಪುಸ್ತಕದ ಕೊನೆಯಲ್ಲಿ 'ಕರಿಸಿರಿಯಾನದ ಹಾದಿಯಲ್ಲಿ' ಎಂಬ ಬೆನ್ನುಡಿ, ಡಾ. ಗಣೇಶಯ್ಯನವರು ಮಾಹಿತಿ ಸಂಗ್ರಹಕ್ಕಾಗಿ ಏನೆಲ್ಲಾ ಮಾಡಿದ್ದರು ಎಂಬುದು ತಿಳಿದು ಬರುತ್ತದೆ. (ಚಲನಚಿತ್ರಗಳ dvdಯಲ್ಲಿ "making of ----" ಇದ್ದಂತೆ)

ಇತರ ಲೇಖಕರು, ಭಾಷೆಗಳ ಪುಸ್ತಕವನ್ನು ಹೋಲಿಸುವುದು ಸರಿಯಲ್ಲ, ಆದರೂ ಇದನ್ನು ಓದುವಾಗ Dan Brown ಪುಸ್ತಕ ಮತ್ತು inidiana jones ಸರಣಿಯ ಚಿತ್ರಗಳನ್ನು ನೋಡಿದ ಹಾಗೆ ಭಾಸವಾಯಿತು.

 

 

Tags: ಕರಿಸಿರಿಯಾನ, Book Review, ಪುಸ್ತಕ ವಿಮರ್ಶೆ