ಕನಕ ಮುಸುಕು (ಡಾ. ಕೆ.ಎನ್. ಗಣೇಶಯ್ಯ)
ನಾನು 'ಕರಿಸಿರಿಯಾನ' ಓದಿದ ಬೆನ್ನಲ್ಲೇ ಇದನ್ನು ಓದಲು ಎತ್ತಿದೆ. ಇವೆರಡರ ಕಥಾವಸ್ತುಗಳು ಸ್ವಲ್ಪ ಭಿನ್ನವಾದರೂ, ಬರವಣಿಗೆಯ ಶೈಲಿ, ಚಿತ್ರರೂಪಿ ನಿದರ್ಶನಗಳು, ಚರಿತ್ರೆಯ ಮೆಲುಕು, ಪೂಜಾ-ವಿನೋದ್ ಪಾತ್ರಗಳು ಇವೆಲ್ಲವೂ ಒಂದೇ ರೀತಿ ಇವೆ. ಎರಡೂ ಕಾದಂಬರಿಗಳು ಮೆದುಳಿಗೆ ಸಾಕಷ್ಟು ಕಸರತ್ತು ನೀಡುತ್ತವೆ. ಮಧ್ಯದಲ್ಲಿ ಇದು ಓದುತ್ತಿದ್ದೇನೋ, ಅದು ಓದುತ್ತಿದ್ದೇನೋ ಅಂತ ಅನಿಸಿತು. ಕನಕ ಮುಸುಕಿನ ಅಂತ್ಯ ನನಗೆ ಇಷ್ಟವಾಯಿತು, ಆದರೆ ಮಧ್ಯದಲ್ಲಿ ಸ್ವಲ್ಪ ಹಿಡಿತ ತಪ್ಪಿದಂತಾಯಿತು, ಇದು ಬಹುಶಃ ನನ್ನ ಏಕಾಗ್ರತೆಯ ಕೊರತೆ ಇರಬಹುದು. ಎರಡು ಅದ್ಭುತ ಪುಸ್ತಕಗಳಿವು ಎಂಬುದರಲ್ಲಿ ಎರಡು ಮಾತಿಲ್ಲ. ಈಗಾಗಲೇ ಜನಪ್ರಿಯವಾಗಿ, ಹಲವು ಪುಸ್ತಕ ಪ್ರೇಮಿಗಳು ವಿಮರ್ಶೆ ಬರೆದಾಗಿದೆ, ಆದ್ದರಿಂದ ಪುಸ್ತಕ ಎಲ್ಲಿ ಸಿಗುತ್ತದೆ ಎಂಬ ಕೊಂಡಿ ಹಾಕಿಲ್ಲ, ಕಥೆಯ ವಿವರ ಬರೆದಿಲ್ಲ. ನನ್ನ ಹಾಗೆ ಇದನ್ನು ಇದುವರೆಗೆ ಓದದೇ ಇರದ ಸದಸ್ಯರು ಖಂಡಿತ ಇದನ್ನು ಎತ್ತಿ ಕೊಳ್ಳಿ.