A history school teacher on his maiden visit to Hampi, encounters a surprise. The suprise leads him to a unique discovery of Vijayanagara empire and the Taalikota war. The discovery reveals an unknown secret of his life. What is the relation between Vijayanagara empire, Taalikota war and the teacher's life? What was the surprise he saw? What's his life's real problem? The books reveals all of these!
When I read the book 'Taalikoteya Kadanadalli', I liked it for many reasons and got attached to it. The book takes us to a spell bound journey of the forgotten Vijayanara empire. The book has history as the integral part of the protagonist, that's the greatness of this book.
“ಚರಿತ್ರೆಯು ನಮ್ಮ ಆಂತರ್ಯದ ಅಸ್ಮಿತೆಯ ವಿಕಾಸಕ್ಕೆ ಹಾಗೂ ಭವಿಷ್ಯದ ಅನುಸಂಧಾನಕ್ಕೆ ಅಗತ್ಯವಾಗಿ ಬೇಕಾದ ಪರಿಕರ. ವಿಠಲ್ ಶೆಣೈಯವರ 'ತಾಳಿಕೋಟೆಯ ಕದನದಲ್ಲಿ' ಕಾದಂಬರಿಯನ್ನು ಓದಿದಾಗ, ಹಲವು ಕಾರಣಗಳಿಂದ ಈ ಕೃತಿ ಆಪ್ತವಾಯಿತು, ಭರವಸೆ ಹುಟ್ಟಿಸಿತು. ಈ ಕೃತಿ ಮರೆತು ಹೋದ ಸಾಮ್ರಾಜ್ಯವಾದ ವಿಜಯನಗರದ ದಿನಗಳಿಗೆ ನಮ್ಮನ್ನು ಕರೆದೊಯ್ದು ಮಂತ್ರ ಮುಗ್ಧ ಮಾಡುತ್ತದೆ. ಹಂಪಿ, ಹೊಸಪೇಟೆ, ಕಮಲಾಪುರ, ವಿರೂಪಾಕ್ಷ, ಉಗ್ರನರಸಿಂಹ, ಹಜಾರರಾಮ, ಮಹಾನವಮಿ ದಿಬ್ಬಗಳಲ್ಲಿ ಸಂಭವಿಸುವ ಎಲ್ಲ ಘಟನೆಗಳೂ ಕನ್ನಡಿಗರ ಅಭಿಮಾನದ ಕೇಂದ್ರಗಳಾಗಿವೆ. ಇದು ಓದುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಲೇಖಕರ ಚರಿತ್ರೆಯ ಬಗೆಗಿನ ತಿಳುವಳಿಕೆ, ವೈಜ್ಞಾನಿಕತೆಯ ನಿಲುವು ಕೃತಿಯಲ್ಲಿ ಅನೇಕ ಕಡೆ ಉದಿತವಾಗುತ್ತದೆ. ವಿಶೇಷವಾಗಿ ನನ್ನ ಗಮನ ಸೆಳೆದಿದ್ದೆಂದರೆ ಈ ಕೃತಿಯಲ್ಲಿ ಕಥಾನಾಯಕನಷ್ಟೇ ನಿರಕ್ತವಾದ ಪಾತ್ರವಾಗಿ ಚರಿತ್ರೆಯೂ ಇಲ್ಲಿ ವಿಜೃಂಭಿಸಿದೆ. ಇದೇ ಈ ಕೃತಿಯ ಹೆಗ್ಗಳಿಕೆ. ಕನ್ನಡದ ಈಗಿನ ಸಾಹಿತ್ಯಿಕ ಸಂದರ್ಭದಲ್ಲಿ ಆಗಿಹೋದ ಚರಿತ್ರೆಯನ್ನು ಧ್ಯಾನಿಸುವ ಲೇಖಕರು ತೀರ ಕಡಿಮೆ. ವರ್ತಮಾನದ ಜಂಜಡ, ತಲ್ಲಣಗಳನ್ನು ಕಟ್ಟಿ ಕೊಡುತ್ತಿರುವ ಉತ್ತಮ ಲೇಖಕರಿದ್ದಾರಾದರೂ, ಮನಸ್ಸಿನ ಕಂಪನ, ತರಂಗ, ಲಯಗಳನ್ನು ಕೃತಿಗಿಳಿಸುವವರು ವಿರಳ. ಈ ಜಾಗತೀಕರಣದ ಪ್ರಚಂಡ ಪ್ರವಾಹದೆದುರು ಚರಿತ್ರೆಯಂತಹ ವಸ್ತುವಿಷಯಗಳು ಮಂಕಾಗುತ್ತಿವೆ. ನಿನ್ನೆಗಳಿಲ್ಲದೇ ನಾಳೆಗಳಿಲ್ಲ. ನಿನ್ನೆಗಳನ್ನು ನಾವು ಕಂಡರಿಯೆವು, ಗೊಂದಲಮಯ ವರ್ತಮಾನ ಹಾಗೂ ಸುಖಮಯವಾದ ಭವಿಷ್ಯದ ನಾಳೆಯ ಕನಸುಗಳನ್ನು ಪೋಣಿಸುತ್ತಿರುವವರು ನಾವು. ನಮ್ಮ ಪೂರ್ವಜರು ನಡೆದು ಬಂದ ದಾರಿಯ ಪರಿಚಯವನ್ನು ನಾವು ಮಾಡಿಕೊಳ್ಳಲೇ ಬೇಕು. ಓದುಗರಲ್ಲಿ ಚರಿತ್ರೆಯ ಪ್ರೇಮವನ್ನು ಬಿತ್ತುತ್ತಾ, ಜೊತೆಗೆ ಕದಡಿದ ಮನಸ್ಸನ್ನು ತಹಬಂದಿಗೆ ತರಲು ವಿಭಿನ್ನವಾಗಿ ಪ್ರಯತ್ನಿಸಬೇಕೆಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಿರುವ ಈ ಕೃತಿ ಕನ್ನಡಿಗರ ಮನಗೆಲ್ಲಲಿ.”
"ಅದ್ಭುತವಾಗಿ ಕಥೆ ಹೆಣೆದಿದ್ದಾರೆ ಶ್ರೀ ವಿಠ್ಠಲ ಶೆಣೈ ಅವರು. ಓರ್ವ ಚರಿತ್ರಾಸಕ್ತ ಅಧ್ಯಾಪಕ ತನ್ನ ಪುಸ್ತಕದ ರಚನೆಗೆ ಉಪಯುಕ್ತವಾದಂತಹ ಕೆಲ ಮಾಹಿತಿ ಕಲೆ ಹಾಕಲು ಹಂಪಿಯಲ್ಲಿ ಅಲೆದಾಡುತ್ತಿರುತ್ತಾರೆ. ಅಲ್ಲಿಂದ ಆತನ ಬಾಳಲಿ ಊಹಿಸಲೂ ಆಗದಂತ ಘಂಟಾನಾವಳಿಗಳು ಜರುಗುತ್ತವೆ. ಅಚಾನಕ್ ಆಗಿ ಪ್ರತ್ಯಕ್ಷ ಆಗುವ ವಿಜಯನಗರದ ಯೋಧರು , ಅವರು ಹೇಳುವ ತಾಳಿಕೋಟೆಯ ಕದನದ ಕಥೆ, ಮೊದಲು ಕೇವಲ ಕಾಲ್ಪನಿಕವಾಗಿ ಅಂತ ಅನ್ಸಿಸಿದ್ರೂ , ಅವರ ಆಗಮನದ ಉದ್ದೇಶ ವಿಚಿತ್ರವಾಗಿ ತೋಚಿದ್ರೂ , ಕಾದಂಬರಿ ಓದುತ್ತಾ ಹೋದಂತೆ ಅದರ ಉದ್ದೇಶ , ಒಳಾರ್ಥಗಳ ತಿರುಳು ಅರಿವಿಗೆ ಬರುತ್ತದೆ. ಇಲ್ಲಿ ಕಥೆ unfold ಆಗುವ ಮಾದರಿ ನನಗೆ ತೀರಾ ಇಷ್ಟವಾಯ್ತು ! ಹೊಸತನವಿದೆ ಈ ಕಾದಂಬರಿಯಲಿ. ಜೀವನದ ಒಂದು ಸಮಸ್ಯೆಯನ್ನು ತಳಹದಿಯನ್ನಾಗಿ ಮಾಡಿಕೊಂಡು ಚರಿತ್ರೆ , ವಿಜಯನಗರ, ತಾಳಿಕೋಟೆಯ ಕದನ ಮುಂತಾದ ವಿಷ್ಯಗಳಿಂದ "ತಾಳಿಕೋಟೆಯ ಕದನದಲ್ಲಿ" ಎಂಬ ಭವ್ಯ ಬಂಗಲೆಯನ್ನು ನಿರ್ಮಿಸಿದ್ದಾರೆ ಲೇಖಕರು !
ಆ ಸಮಸ್ಯೆ ಏನು ? ಅದಕ್ಕೂ ತಾಳಿಕೋಟೆಗೂ ಎತ್ತಣದ ಸಂಭಂದ ? ಎಂಬುದನ್ನು ಪುಸ್ತಕ ಓದಿ ತಿಳಿದುಕೊಳ್ಳಿ. Psychological ಥ್ರಿಲ್ಲರ್ ಕಥೆ ಆದುದರಿಂದ ಕಥೆಯ ರೋಚಕತೆಯನ್ನು ಕಳೆದುಕೊಳ್ಳದಿರಲೆಂದೇ , ಸಣ್ಣದಾಗಿ ಕಥೆಯ ಪರಿಚಯ ಮಾಡಿಕೊಟ್ಟೆನಷ್ಟೇ !
ಪುಸ್ತಕದ ಓದಿದ ನೆಪದಲ್ಲಿ ಕೆಲವು ಚಾರಿತ್ರಿಕ ಅಂಶಗಳ ಪರಿಚಯವಾಯ್ತು. ಹಂಪೆಯ ಸ್ಥಳ ಪರಿಚಯ ಕೂಡ ಸ್ಥೂಲವಾಗಿ ನಡೆಯಿತು. ಹಾಗೂ ನನ್ನ ಕನ್ನಡ ಪದಗುಚ್ಚಕ್ಕೆ "ಪೊಂಜರಿಗೆ", "ಪೂಂಜಳ" ಮುಂತಾದ ಪದಗಳ ಸೇರ್ಪಡೆ ಕೂಡ ಸಾಂಗವಾಗಿ ನೆರವೇರಿತು. ಧನ್ಯವಾದ ಲೇಖಕರಿಗೂ ಹಾಗೂ MyLang Books Digital ಮೈಲ್ಯಾಂಗ್ ಬುಕ್ಸ್ ಡಿಜಿಟಲ್ ಸಂಸ್ಥೆಗೂ...ಒಂದೊಳ್ಳೆ ಪುಸ್ತಕ ಈ-book ರೂಪದಲ್ಲಿ ನಮ್ಮ ಕೈಸೇರಿದೆ. Last but not the least, ಕವರ್ ಡಿಸೈನ್ ತುಂಬಾ ಅರ್ಥ ಪೂರ್ಣವಾಗಿದೆ. ಇದನ್ನು ಕೊನೆಯಲ್ಲಿ ಗಮನಿಸಿದೆ. ಅಲ್ಲಿರುವ ಮುಖದ ರೇಖಾ ಚಿತ್ರದ ಹಿಂದೆ , ಇಡೀ ಕಾದಂಬರಿಯ ವಸ್ತು ಅಡಗಿದೆ ! ( Sorry about the spoiler)"
- Karthik Krishna
"ನಮಸ್ಕಾರ,
ನನ್ನ ಹೆಸರು ಪ್ರಶಾಂತ. ಜಯನಗರ. ಬೆಂಗಳೂರು. ಮೂಲತಃ ಉಡುಪಿ ಜಿಲ್ಲೆ
ತಾಳಿಕೋಟೆಯ ಕದನದಲ್ಲಿ. ರಾಷ್ಟ್ರೋತ್ಥಾನ ಸಾಹಿತ್ಯದ, ಜಯನಗರ ಕಾರ್ಯಕರ್ತ ಶ್ರೀ ಹರೀಶ್ ಕಡಬ ತುಂಬಾ ಚೆನ್ನಾಗಿದೆ ಎಂದರು. ಕೊಂಡು ಓದಿದ ಮೇಲೆ ಉತ್ಪ್ರೇಕ್ಷೆ ಎನ್ನಿಸಲಿಲ್ಲ. ಕಡೆಯವರೆಗೂ ಗುಟ್ಟು ಬಿಟ್ಟುಕೊಡಲಿಲ್ಲ."
- ಪ್ರಶಾಂತ್
"Truly a very unique book on a topic that is not explored much by many writers. The way the story is expressed makes this book a fantastic read. The story line is thrilling and the ending was so unexpected that it left me astounded. The only problem with the book is that it is a bit too short to do such a good storyline justice. 4.5/5"
- Anonymous
"PART 1 ‘ತಾಳಿಕೋಟೆಯ ಕದನದಲ್ಲಿ’ - ವಿಠಲ್ ಶೆಣೈ ಅವರ ಕಾದಂಬರಿಯ ಹೆಸರು ಇದು. ಇದರ ಹೆಸರು ಕೇಳಿದ ಕೂಡಲೇ ಇದೊಂದು ಚಾರಿತ್ರಿಕ ಕತೆ ಎನಿಸಿದರೆ ಸರಿ. ಇಲ್ಲ ಇದೊಂದು ಸಾಮಾಜಿಕ ಕಾದಂಬರಿ ಎಂದರೆ ಅದೂ ಸರಿ. ಇದು ವೈಜ್ಞಾನಿಕ ಇದ್ದರೂ ಇರಬಹುದು ಎಂದರೆ ಅದು ಮತ್ತೂ ಸರಿ. ಹೌದು ಈ ಎಲ್ಲ ಅಂಶಗಳ ಮಿಶ್ರಣ ಈ ಕಾದಂಬರಿ. ಇಲ್ಲಿ ಚರಿತ್ರೆ ವರ್ತಮಾನಕ್ಕೆ ಬರುತ್ತದೆ. ವರ್ತಮಾನದಲ್ಲಿ ಇದ್ದುಕೊಂಡು ಇತಿಹಾಸವನ್ನು ನೋಡುವ ಚಾಣಾಕ್ಷತೆ ಇಲ್ಲಿದೆ. ಜತೆಗೆ ಮನದೊಳಗಿನ ಭಾವವನ್ನು ತನಗರಿವಿಲ್ಲದೆ ಹೇಗೆ ರೂಢಿಸಿಕೊಳ್ಳುತ್ತೇವೆ, ಅದು ತನಗರಿವಿಲ್ಲದೇ ಹೇಗೆ ಬಗೆಹರಿಯುತ್ತದೆ ಎನ್ನುವುದು ರೋಚಕವಾಗಿ ಓದಿಸಿಕೊಳ್ಳುತ್ತದೆ. ಇಲ್ಲಿರುವ ಪಾತ್ರಗಳಿಗೆ ಯಾವುದೇ ಅವಸರವಿಲ್ಲ. ಸಾವಧಾನವಾಗಿ ಓದುಗನನ್ನು ಇತಿಹಾಸ ಮತ್ತು ವರ್ತಮಾನದಲ್ಲಿ ಕೈಹಿಡಿದು ನಡೆಸುತ್ತವೆ! ಕಾದಂಬರಿಯ ಇನ್ನೊಂದು ಪ್ರಮುಖ ಅಂಶವೆಂದರೆ ಬರುವ ಕೆಲವೇ ಪ್ರಮುಖ ಪಾತ್ರಗಳು ಮತ್ತು ಕೆಲವೇ ಪ್ರಮುಖ ಸ್ಥಳಗಳು. ಎಲ್ಲಿಯೂ ಗೊಂದಲವಿಲ್ಲ, ಅಂಗೈ ಗೆರೆಯಷ್ಟೇ ಸ್ಪಷ್ಟ ಪಾತ್ರ ಮತ್ತು ವಿಷಯ. ತಾಳಿಕೋಟೆ ಎಂದಾಕ್ಷಣ ಇತಿಹಾಸ ಬಲ್ಲವರಿಗೆ ನೆನಪಾಗುವುದು ವಿಜಯನಗರ ಸಾಮ್ರಾಜ್ಯ. ಈ ತಾಳಿಕೋಟೆ ಕದನದಿಂದ ವಿಜಯನಗರ ಹಾಳು ಹಂಪಿಯಾಯಿತು. ಇದೇ ಈ ಕತೆಯ ತಿರುಳು. ಕಾದಂಬರಿ ಆರಂಭವಾಗುವುದೇ ಒಂದು ಕೊಲೆಯ ಮೂಲಕ. ಕೊಲೆ ಮಾಡಿದವ ಒಬ್ಬ ಇತಿಹಾಸ ಪ್ರಾಧ್ಯಾಪಕ ಮತ್ತು ಲೇಖಕ. ಇಡೀ ಕಾದಂಬರಿ ಸಾಗುವುದೇ ಈ ಪ್ರಾಧ್ಯಾಪಕ ವೈಕುಂಠನ ನಿರೂಪಣೆಯಲ್ಲಿ. ತನ್ನ ಬಗ್ಗೆ, ತನ್ನ ಆತ್ಮೀಯ ಮಿತ್ರ, ಕುಟುಂಬ, ಊರು, ಗದ್ದೆ, ಕಾಲೇಜು ಹೀಗೆ ಎಲ್ಲವುಗಳನ್ನು ಪರಿಚಯಿಸುತ್ತ ಸಾಗುತ್ತಾರೆ. ಅಂದಹಾಗೆ ಆರಂಭದಲ್ಲಿ ಕೊಲೆ ಮಾಡುವುದು ಇದೇ ಉಪನ್ಯಾಸಕ. ಅದೂ ತನ್ನ ಆತ್ಮೀಯ ಮಿತ್ರನ್ನನೇ! ತಾನಾಯ್ತು, ತನ್ನ ಕೆಲಸವಾಯ್ತು ಎಂದಿದ್ದ ಈ ಪ್ರೊೆಸರ್ ಮಡದಿ ದೇವಿಕಾಳ ತಮ್ಮ ಗಿರೀಶ್ ಮೂರ್ತಿ ಮದುವೆಗೆ ಹೊಸಪೇಟೆಗೆ ಹೊರಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ಹೊಸಪೇಟೆ ಬಳಿ ಇರುವ ಹಂಪಿಯನ್ನು ನೋಡುವ ಸಲುವಾಗಿ ವೈಕುಂಠ ತಯಾರಾಗುತ್ತಾನೆ. ಮದುವೆ ಮನೆಯ ಗೌಜು ಗದ್ದಲವನ್ನು ಬಿಟ್ಟು ತಾನು ಹಂಪೆಗೆ ಪಯಣ ಬೆಳೆಸುತ್ತಾನೆ. ಹಂಪೆಯ ಸೌಂದರ್ಯಕ್ಕೆ ಮಾರುಹೋಗುವ ಇತಿಹಾಸ ಉಪನ್ಯಾಸಕ ವೈಕುಂಠನಿಗೆ ಆಶ್ಚರ್ಯವೊಂದು ಕಾದಿರುತ್ತದೆ. ಉಗ್ರನರಸಿಂಹ ಮೂರ್ತಿ ಬಳಿಯ ಬಡವಿ ಲಿಂಗದ ಬಳಿ ಅಚಾನಕ್ಕಾಗಿ ವಿಜಯನಗರ ಸಾಮ್ರಾಜ್ಯದ ಇಬ್ಬರು ಸೈನಿಕರು ಪ್ರತ್ಯಕ್ಷರಾಗುತ್ತಾರೆ. ಅದು ವೈಕುಂಠ ಸರಿಸಿದ ಒಂದು ಕಲ್ಲಿನಿಂದ ಅವರಿಗೆ ಮತ್ತೆ ಮಾನವ ರೂಪ ಸಿದ್ಧಿಸುತ್ತದೆ. ಅದಕ್ಕಾಗಿ ಸೈನಿಕರು ಇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದಿನ ಕಾಲದ ಸೈನಿಕರು ಇರುವೆ ಗಾತ್ರದವರಾಗಿರುತ್ತಾರೆ. ಮತ್ತು ಹೀಗೆ ಆಗುವುದು ಆಗಿನ ಕಾಲದ ಯುದ್ಧ ತಂತ್ರವೆಂದು ತಿಳಿಸುತ್ತಾರೆ. ಇದರಿಂದ ಪುಸ್ತಕ ಬರೆಯುವ ಕನಸು ಹೊತ್ತ ವೈಕುಂಠನಿಗೆ ಸಂತಸವಾಗುತ್ತದೆ."
- ಚನ್ನಮಲ್ಲಿಕಾರ್ಜುನ ಹದಡಿ
"PART 2 ಉಗ್ರನರಸಿಂಹ ಮೂರ್ತಿ ಬಳಿಯ ಬಡವಿ ಲಿಂಗದ ಬಳಿ ಅಚಾನಕ್ಕಾಗಿ ವಿಜಯನಗರ ಸಾಮ್ರಾಜ್ಯದ ಇಬ್ಬರು ಸೈನಿಕರು ಪ್ರತ್ಯಕ್ಷರಾಗುತ್ತಾರೆ. ಅದು ವೈಕುಂಠ ಸರಿಸಿದ ಒಂದು ಕಲ್ಲಿನಿಂದ ಅವರಿಗೆ ಮತ್ತೆ ಮಾನವ ರೂಪ ಸಿದ್ಧಿಸುತ್ತದೆ. ಅದಕ್ಕಾಗಿ ಸೈನಿಕರು ಇವರಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ಅಂದಿನ ಕಾಲದ ಸೈನಿಕರು ಇರುವೆ ಗಾತ್ರದವರಾಗಿರುತ್ತಾರೆ. ಮತ್ತು ಹೀಗೆ ಆಗುವುದು ಆಗಿನ ಕಾಲದ ಯುದ್ಧ ತಂತ್ರವೆಂದು ತಿಳಿಸುತ್ತಾರೆ. ಇದರಿಂದ ಪುಸ್ತಕ ಬರೆಯುವ ಕನಸು ಹೊತ್ತ ವೈಕುಂಠನಿಗೆ ಸಂತಸವಾಗುತ್ತದೆ. ತಾಳಿಕೋಟೆ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕರಿಂದಲೇ ಸಮರದ ವಿವರವನ್ನು ತಿಳಿದು ಅದನ್ನೇ ಪುಸ್ತಕ ರೂಪಕ್ಕೆ ಇಳಿಸಿದರೆ ಇತಿಹಾಸದ ಬಗ್ಗೆ ಮಾಹಿತಿ ನಿಖರವಾಗಿರುತ್ತೆ ಎಂಬ ಎಣಿಕೆ ಪ್ರಾಧ್ಯಾಪಕನದ್ದು. ಹಾಗಾಗಿ ಆ ಸೈನಿಕರನ್ನ ಜತೆಗಿಟ್ಟುಕೊಂಡೇ ಹಂಪೆ ಸುತ್ತುತ್ತಾನೆ. ಆದರೆ ಇವರ ಜತೆಗಿನ ಬಾಂಧವ್ಯ ಅಷ್ಟಕ್ಕೆ ಮುಗಿಯೊಲ್ಲದು. ಅವರಿಗೆ ತಾಳಿಕೋಟೆ ಕದನದಲ್ಲಿ ವಿಜಯನಗರಕ್ಕೆ ದ್ರೋಹ ಬಗೆದ ಗಿಲಾನಿ ಸೋದರರ ವಿರುದ್ಧ ಸೇಡು ತೀರಿಸಿಕೊಳ್ಳುವ ಹಠ. ಒಬ್ಬ ದೇಶದ್ರೋಹಿಯಾಗಿ ಹುಟ್ಟಿ ಮರಣ ಹೊದಿದ್ದಾನೆ. ಉಳಿದ ಇನ್ನೊಬ್ಬನನ್ನ ಹುಡುಕುವುದು ಮತ್ತು ಆತನನ್ನು ಕೊಲೆ ಮಾಡುವುದು ಇವರ ಉದ್ದೇಶ. ಮತ್ತೆ ಹಾಗೇ ಈಗ ಕೊಲೆ ಮಾಡಿದರೆ ಮತ್ತೆ ಇನ್ನೊಮ್ಮೆ ಆವರು ಜನ್ಮ ತಾಳುವುದಿಲ್ಲ ಎಂಬ ನಂಬಿಕೆ ಆ ಸೈನಿಕರಾದ ಮಲ್ಲಣ್ಣ ಮತ್ತು ತ್ರಿವಿಕ್ರಮ ಅವರದು. ಯಾರು ಗಿಲಾನಿ ಸೋದರ, ಆತನ ಕೊಲೆ ಮಾಡಿದರಾ? ನಂತರ ಆ ಸೈನಿಕರು ಏನಾದರು.... ಹೀಗೆ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಲೇ ಕಾದಂಬರಿ ಸಾಗುತ್ತದೆ. ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಎಲ್ಲೂ ಬೇಸರ ತರುವುದಿಲ್ಲ. ಎಲ್ಲವೂ ಅಚ್ಚುಕಟ್ಟು. ಕಾದಂಬರಿಯ ಮುನ್ನುಡಿಯಲ್ಲಿ ಡಾ. ಎಚ್.ಎನ್. ಶುಭದಾ ಅವರು ಒಂದು ಮಾತು ಉಲ್ಲೇಖನೀಯ. ‘ಕಾದಂಬರಿ ಓದುಗರಿಗೆ ಭಾವನಾತ್ಮಕವಾಗಿ ಹತ್ತಿರವಾಗುತ್ತದೆ. ಲೇಖಕರ ಚರಿತ್ರೆಯ ಬಗೆಗಗಿನ ತಿಳಿವಳಿಕೆ, ವೈಜ್ಞಾನಿಕತೆಯ ನಿಲುವು ಕೃತಿಯಲ್ಲಿ ಅನೇಕ ಕಡೆ ಉದಿತವಾಗುತ್ತದೆ. ಭವಿಷ್ಯ ದರ್ಶಕ, ಬೆಂಡವಾಲೆಗಳು ಕೃತಿಗೆ ನಾಡಕದ ಮಾತ್ರಿಕ ಸ್ಪರ್ಶ ನೀಡಿವೆ’. (ವಿಜಯವಾಣಿ ಪತ್ರಿಕೆಗೆ ಬರೆದ ವಿಠಲ್ ಶೆಣೈ ಅವರ ತಾಳಿಕೋಟೆ ಕದನದಲ್ಲಿ ಕಾದಂಬರಿಯ ವಿಮರ್ಶೆ ಇದು.)"
- ಚನ್ನಮಲ್ಲಿಕಾರ್ಜುನ ಹದಡಿ
"'ತಾಳಿಕೋಟೆಯ ಕದನದಲ್ಲಿ' ಕಾದಂಬರಿಯು ಸಹಜವಾಗಿಯೇ ಕುತೂಹಲವನ್ನು ಕೊನೆಯ ಅಧ್ಯಾಯದವರೆಗೂ ಕಾಯ್ದಿಡುತ್ತದೆ. ಶುರುವಿನ ಅಧ್ಯಾಯದಲ್ಲೇ ಕತೆಯ ಮುಖ್ಯವಾದ ಅಂಶವನ್ನು ಕೈಗೊಳ್ಳುವ ಮುಖ್ಯಪಾತ್ರಧಾರಿಯು, ಅದರ ಮೂಲಕಾರಣದ ಬಗೆಗೆ ಹೇಳುವಲ್ಲಿ ಓದುಗನನ್ನು ಕತೆಯೊಳಗೆ ಆಹ್ವಾನಿಸಿಕೊಳ್ಳುತ್ತಾನೆ. ನಂತರದ ಬೆಳವಣಿಗೆಗಳು ಒಂದಕ್ಕೊಂದು ಸರಪಳಿಯಾಗಿ ಹೊಂದಿಕೊಂಡು ಸಾಗಿ, ಉಪಸಂಹಾರವು ಒಪ್ಪಿಕೊಳ್ಳಬಹುದಾದ ಸಹಜತೆಯಲ್ಲೇ ನಿರೂಪಿಸಲಾಗಿದೆ. ಒಟ್ಟಾರೆಯಾಗಿ ಎಲ್ಲೂ ಏಕತಾನತೆಯಿರದೆ, ಪುಸ್ತಕವು 'ಮುಂದೇನಾಗಬಹುದು?' ಎಂಬ ಪ್ರಶ್ನೆಯ ಜೊತೆಗೇ ಓದಿಸಿಕೊಂಡು ಹೋಗುವುದರಿಂದ ಓದಿ ಮುಗಿಸುವವರೆಗೆ ನಾನು ಪುಸ್ತಕದ ಗುಂಗಿನಲ್ಲಿ ಇದ್ದದ್ದಂತೂ ಸತ್ಯ! ನಿಮ್ಮ ಬರಹದ ಪಯಣವು ಹೀಗೆಯೇ ನಿರಂತರವಾಗಿ ಮುಂದುವರೆಯಲಿ."
- ಅರುಣ್ ಅಂಚೆ'
"ಇತಿಹಾಸ ಇಷ್ಟಪಡುವವರಿಗೆ ಈ ಕಾದಂಬರಿ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ತುಂಬಾ ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ ಈ ಕಾದಂಬರಿ ವಿಜಯನಗರದ ಸಾಮ್ರಾಜ್ಯ ಪಥನ,ತಾಳಿಕೋಟೆಯ ಕದನ,ವಿಜನಗರದ ಕಾಲದಲ್ಲಿ ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುವುದರ ಬಗ್ಗೆ,ಹಂಪಿಯಲ್ಲಿ ಈಗ ಇರುವ ದೇವಾಲಯಗಳ ಬಗ್ಗೆ ಅವುಗಳನ್ನು ಕಟ್ಟಿದ ಬಗೆ, ನಾಶ ಮಾಡಿದ ಬಗ್ಗೆ ಲೇಖಕರು ಲೇಖನಗಳನ್ನು ಕಾದಂಬರಿಯ ಮದ್ಯ ಮದ್ಯ ಕೊಟ್ಟಿದ್ದಾರೆ. ಕಾದಂಬರಿ ಕೊನೆಯಂತು ಯಾರೂ ಊಹಿಸಲು ಸಾದ್ಯವಿಲ್ಲ"
- ಶಶಿಕಿರಣ್
"I enjoyed this book very much, the plot was wonderful, the suspence was such that my guess of the story's ending was wrong and that was the best part. Every character was wonderful. Give us some more stories like this. If this is filmed, it will be a hit."
- Anita Shenoy
"Amazing read. The fine,detailed description of the beautiful ruins of Hampi , transported me back into the place. And by the end of the book i had a strong desire to revist Hampi. Indepth creation of the characters 'Trivikrama and Mallanna',the soldiers of the battle Talikote makes an exciting feature of this book. Highly recommended read."
- Maya Bhat
"Perfect blend of History of Vijayanagara Empire, Family and psychology . Catches the reader till the end of story with curiosity ."
- Sreelakshmi Yajamaan
"Loved the way you write. Story line, details of Hampi were capturing the mind and made me read the book in one go. Really happy to see the talent."
- Chetana Prabhu
"I finished reading this book in 3 hrs 15 mins in just one sitting. Very nice combination of history, modern life and family values. Curiosity kept me going from page to page, very beautiful. "
- Vedavyas Nayak
"Awesome read. The subject and plot are refreshingly new. You must seriously consider translating this to English so that it reaches more people. More success to you in the days to come …
"
- SN Murthy
"Wonderful writing by Vittal on 'Talikoteya Kadanadalli'. Proud to say that he is my friend from school days...with great respect for Kannada..."
- Haridas SP
"ಬೆಳಿಗ್ಗೆ ಬಂದ ಪುಸ್ತಕ, ಪೂರ್ತಿ ಓದಿಯೇ ಕೆಳಗಿಟ್ಟಿದ್ದು. ಕನ್ನಡದಲ್ಲಿ ಇಂತಹ ಕತೆಯನ್ನು ತ್ರಿವೇಣಿಯವರ ಕಾದಂಬರಿಯ ನಂತರ ಇದೇ ಮೊದಲು ಓದಿದ್ದು. ಇತಿಹಾಸ, ವಿಜ್ಞಾನ ಮತ್ತು ಇಷ್ಟೊಂದು ಪಾತ್ರಗಳ ಪೋಣಿಕೆ ಬಹಳ ಸುಂದರವಾಗಿದೆ. ಪುಸ್ತಕ ನನ್ನ ಸಾಹಿತ್ಯಾಸಕ್ತ ಮಿತ್ರರೊಂದಿಗೆ ಹೆಮ್ಮೆಯಿಂದ ಹಂಚುವಂತಿದೆ. ಓದುವಾಗ ಹಂಪಿಯ ಸ್ಥಳಗಳು, ವಿಜಯನಗರದ ವೈಭವಗಳು ಕಣ್ಣೆದುರು ನಿಂತಂತೆ ಆಯಿತು. ಪುಸ್ತಕ ಓದಿದಾಗ ಹಂಪಿ ನೋಡಲು ಗೈಡ್ ಅಗತ್ಯವಿಲ್ಲ ಅನ್ನುವಷ್ಟು ವಿಷಯಗಳು ತಿಳಿದವು. ಮುನ್ನುಡಿ ಕೂಡಾ ಬಹಳ ಸುಂದರವಾಗಿತ್ತು. ಅತಿ ಪ್ರಿಯವಾಗಿ ಓದಿಸಿಕೊಂಡು ಹೋದ ಪುಸ್ತಕ."
- ಬಸ್ತಿ ಶೋಭಾ ಶೆಣೈ
"Taali(Mangalya) Koteyaa(family) Kadanadalli (A war/struggle) – A Struggle To Save A Married Life :)
Narrated well by keeping excitement through out book. Gook work sir :)"
- Rakesh Arunkumar
"ಪ್ರಥಮ ಕಾದಂಬರಿ ಅನಿಸುವುದೇ ಇಲ್ಲ. ಆರಕ್ಕೆ ಏರದೇ ಮೂರಕ್ಕೆ ಇಳಿಯದೇ ಎಲ್ಲವೂ ಸಮಂಜಸವಾಗಿತ್ತು. ನಮ್ಮ ಮಣ್ಣಿನ ವಾಸನೆ ಬರಿಸುವ ಒಂದು ನೈಜ್ಯವಾದ ಕಥೆ. I totally loved it! "
- Anjana Kamath
"Awesome book!. As I went on reading it was holding up the excitement, the build up was too good. Hats off. Great work. Keep it up. Expecting more. "
- Shyam Prasad Sajankila
"Very very nice book!"
- namya narayan bhakta
"Beautifully written fiction depicting the glory of the Vijayanagar empire during its time and also how did the downfall happened. Vittal Shenoy has crafted a wonderful storyline which will take the reader through the historical masterpieces of Hampi while keeping the reader interested on what will happen next in the story? It’s really a Page turner. Truly enjoyed the start of the journey in a filmy style idea of Vishwa’s killing & then taking the flashback of what caused the scene. I also enjoyed other characters, especially Keshav, Devika, Trivikram & Mallanna. Book also depicts Vittal Shenoy’s mastery over the language,his sense of humor & abundance knowledge that he has on all subjects. Look forward for more masterpieces from him."
- Sadanand Bhat
"Vibhinnavagide. Uttama pustaka!"
- Shiva
"ಕಥೆಯ ಪಾತ್ರಗಳು ಸೊಗಸಾಗಿ ಮೂಡಿಬಂದಿದೆ ಹಾಗೂ ಕೊನೆಯ ತನಕ ಓದುಗನ ಕುತೂಹಲವನ್ನು ಕಾಯ್ದಿರಿಸಲು ಸಫಲವಾಗಿದೆ. ಲೇಖಕರಿಗೆ ನನ್ನ ಅಭಿನಂದೆಗಳು."
- KeerthanaPai.
"Awesome good maiden novel brother.. Enjoyed every moment of reading... Distinctly unique story with mystery, thrill, knowledge and message to the society.. Keep it up.. Go ahead.. Good luck..."
- Geetha Pai
"ಓದುವ ಹವ್ಯಾಸದಿಂದ ಕೆಲಕಾಲ ದೂರವಿದ್ದ ನನಗೆ ಮತ್ತೆ ಓದಲು ಪ್ರೇರೇಪಿದ ಕಾದಂಬರಿ "ತಾಳಿಕೋಟೆಯ ಕದನದಲ್ಲಿ". ಆತ್ಮೀಯ ಗೆಳೆಯನ ಪುಸ್ತಕವೆಂಬಂಶವನ್ನು ದೂರವಿಟ್ಟು ನೋಡಿದಾಗಲೂ ವಿಶಿಷ್ಟವಾಗಿ ಕಾಣುತ್ತದೆ. ಪರಿಷ್ಕರಣೆ ಸಂದರ್ಭದಲ್ಲಿ ಓದಿದ್ದೆ, ಮತ್ತೆ ಓದಲು ಕಾತರದಿಂದ ಎದುರು ನೋಡುತ್ತಿದ್ದೇನೆ."
- ಸತೀಶ್ ಸಿಂದೋಗಿ (http://deltalearn.in/ ಸಂಸ್ಥಾಪಕ )